ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಪಿಸ್ತೂಲ್‌ನೊಂದಿಗೆ ಓಡಾಡುತ್ತಿರುವ ಉಪಲೋಕಾಯುಕ್ತ ಬಿ.ವೀರಪ್ಪ

“ರಾಯಚೂರಿನಲ್ಲಿ ರೌಡಿಸಂ ಯತ್ನ, ಬೆದರಿಕೆ ಕರೆಗಳು ಬರುತ್ತಿವೆ” – ಮಂಡ್ಯದಲ್ಲಿ ಆತಂಕಕಾರಿ ಹೇಳಿಕೆ

Advertisement

SPECIAL BB NEWS KANNADA 

Advertisement

ಮಂಡ್ಯ, ಮೇ 23. ‘ರಾಯಚೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕೆಲ ದುಷ್ಕರ್ಮಿಗಳು ಗುಂಪು ಕಟ್ಟಿಕೊಂಡು ನನ್ನ ಮೇಲೆ ರೌಡಿಸಂ ಮಾಡಲು ಮುಂದಾಗಿದ್ದರು. ಇತ್ತೀಚಿನ ದಿನಗಳಲ್ಲಿ ಬೆದರಿಕೆ ಕರೆಗಳೂ ಬರುತ್ತಿವೆ. ಆದ್ದರಿಂದ ಆತ್ಮರಕ್ಷಣೆಗಾಗಿ ಪಿಸ್ತೂಲ್ ಜತೆಯಲ್ಲಿಟ್ಟುಕೊಂಡೇ ಓಡಾಡುತ್ತಿದ್ದೇನೆ’ ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಹೇಳಿದ್ದಾರೆ.

ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಗುರುವಾರ ನಡೆದ ಬಾಕಿ ಪ್ರಕರಣಗಳ ವಿಚಾರಣೆ ಹಾಗೂ ವಿಲೇವಾರಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

“ಲೋಕಾಯುಕ್ತ ಸಂಸ್ಥೆ ಯಾರಿಗೂ ಬಗ್ಗುವುದಿಲ್ಲ, ಯಾವುದೇ ಶಿಫಾರಸ್ಸಿಗೂ ಮಣಿಯುವುದಿಲ್ಲ. ಧರ್ಮ ಸಂಸ್ಥಾಪನೆಗಾಗಿ ಭಗವಾನ್ ವಿಷ್ಣು ಸುದರ್ಶನ ಚಕ್ರ ಹಿಡಿದಂತೆ, ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸಲು ನಾನು ಪಿಸ್ತೂಲ್ ಅನ್ನು ಆಯುಧವಾಗಿ ಇಟ್ಟುಕೊಂಡಿದ್ದೇನೆ” ಎಂದು ಅವರು ಹೇಳಿದರು.

ಕರ್ನಾಟಕದಲ್ಲಿ ಭ್ರಷ್ಟಾಚಾರ ಹೆಚ್ಚಳದ ಬಗ್ಗೆ ಆತಂಕ ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ಬೆಳೆದಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು,“ರಾಜ್ಯದ ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ದೇಶದ ಅತ್ಯಂತ ಭ್ರಷ್ಟ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವು ಐದನೇ ಸ್ಥಾನದಲ್ಲಿದೆ. ಈ ಪಿಡುಗನ್ನು ತಡೆಯದಿದ್ದರೆ ಭವಿಷ್ಯದಲ್ಲಿ ಗಂಭೀರ ಪರಿಣಾಮ ಎದುರಾಗಲಿದೆ. ಬ್ರಿಟಿಷರ ಆಡಳಿತ ಕಾಲದಂತೆಯೇ ಜನರು ಸಂಕಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಬಹುದು” ಎಂದು ಎಚ್ಚರಿಸಿದರು.

news_1778905892_0_440.webp

news_1778142080_0_556.webp

news_1777986246_0_709.webp

16 ಜಿಲ್ಲೆಗಳಲ್ಲಿ 1,281 ಅಕ್ರಮ ಪ್ರಕರಣ ಪತ್ತೆ

“ಭ್ರಷ್ಟಾಚಾರದಲ್ಲಿ ತೊಡಗಿರುವವರ ವಿರುದ್ಧ ಲೋಕಾಯುಕ್ತ ಸಂಸ್ಥೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದೆ. ಅಧಿಕಾರ ಎನ್ನುವುದು ಭ್ರಷ್ಟಾಚಾರ ನಡೆಸಲು ಸಿಕ್ಕಿರುವ ಲೈಸೆನ್ಸ್ ಅಲ್ಲ. ಭ್ರಷ್ಟ ಅಧಿಕಾರಿಗಳನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ” ಎಂದು ಹೇಳಿದರು.“ರಾಜ್ಯದ 16 ಜಿಲ್ಲೆಗಳಲ್ಲಿ ಈಗಾಗಲೇ 1,281 ಅಕ್ರಮ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಭ್ರಷ್ಟಾಚಾರ ತಡೆಗಟ್ಟಲು ಲೋಕಾಯುಕ್ತ ಸಂಸ್ಥೆ ಕಟ್ಟುನಿಟ್ಟಿನ ಕ್ರಮ ಮುಂದುವರಿಸಲಿದೆ” ಎಂದು ಸ್ಪಷ್ಟಪಡಿಸಿದರು. ಭಾರತದ ಭ್ರಷ್ಟಾಚಾರದ ಸ್ಥಿತಿಗತಿಗಳ ಬಗ್ಗೆ ಮಾತನಾಡಿದ ಅವರು,“ಭ್ರಷ್ಟಾಚಾರ ಇರುವ 140 ರಾಷ್ಟ್ರಗಳ ಪೈಕಿ ಭಾರತವು 91ನೇ ಸ್ಥಾನದಲ್ಲಿದೆ. ಇದು ಆತಂಕಕಾರಿ ಬೆಳವಣಿಗೆ” ಎಂದು ಅಭಿಪ್ರಾಯಪಟ್ಟರು.

Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಗ್ರಾಮ ಪಂಚಾಯಿತಿಯಲ್ಲಿ ನಕಲಿ ಸಹಿ ಆರೋಪ: ₹39,600 ಡ್ರಾ ಪ್ರಕರಣಕ್ಕೆ ಹೊಸ ತಿರುವುಜೋಳ ಖರೀದಿ ಸ್ಥಗಿತ: ಜಿಲ್ಲಾಧಿಕಾರಿಗಳಿಗೆ ರೈತರ ತುರ್ತು ಮನವಿಅಪಪ್ರಚಾರಕ್ಕೆ ಕಿವಿಗೊಡಬೇಡಿ: ಆರ್. ಸಿದ್ದನಗೌಡ ತುರವಿಹಾಳ ಮನವಿಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾಗಿ ಎನ್. ಸತ್ಯನಾರಾಯಣ ಶೆಟ್ಟಿ ಸಿಂಧನೂರಿಗೆ ಡಬಲ್ ಧಮಾಕಾ..? ಇಬ್ಬರು ಬಾದರ್ಲಿಗಳಿಗೆ ಸಚಿವ ಸ್ಥಾನ ಸಿಗುತ್ತಾ..?“ಸಿದ್ದರಾಮಯ್ಯ ವ್ಯಕ್ತಿ ಅಲ್ಲ… ಒಂದು ಶಕ್ತಿ”“ಸಿದ್ದು ಸರ್ಕಾರ ಪತನ..! ಇಂದಿನಿಂದ ಎಲ್ಲಾ ಸಚಿವರು ಮಾಜಿ ಸಚಿವರು”ಬುಕ್ಕನಟ್ಟಿ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಬಸವನಗೌಡ ಬಾದರ್ಲಿಗೆ ಸಚಿವ ಸ್ಥಾನ ಫಿಕ್ಸ್ ಆಗ್ತಿದೆಯಾ..?8 ವರ್ಷದ ಮಕ್ಕಳಿಗೆ ಮುಟ್ಟು..! ಬಾಲ್ಯ ಕಸಿದುಕೊಳ್ಳುತ್ತಿರುವ ಪಿಜ್ಜಾ-ಬರ್ಗರ್ ಸಂಸ್ಕೃತಿ..?ಅಕ್ರಮ ಗೋ ಸಾಗಾಟ ಹಾಗೂ ಗೋಹತ್ಯೆ ತಡೆಗೆ ಕ್ರಮ ಕೈಗೊಳ್ಳುವಂತೆ ಮನವಿಸರಕಾರಿ ನೌಕರಿ,ಸಂಬಳ ಬೇಕು ಆದರೆ ನಿಯಮ ಬೇಡವಾ...?ಪಿಸ್ತೂಲ್‌ನೊಂದಿಗೆ ಓಡಾಡುತ್ತಿರುವ ಉಪಲೋಕಾಯುಕ್ತ ಬಿ.ವೀರಪ್ಪ“ಕಾಕ್‌ರೋಚ್ ಜನತಾ ಪಾರ್ಟಿ” ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ಸಹನಾ ಮಕ್ಕಳ ಆಸ್ಪತ್ರೆಯ ವೈದ್ಯಕೀಯ ಸಾಧನೆ