ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

‘ಖಾಕಿ’ ಗೂಂಡಾಗಿರಿ ಆರೋಪ: ಸಾರ್ವಜನಿಕನಿಗೆ ಪಿಎಸ್‌ಐ ಕಿರಣ ಮೋಹಿತೆ ಅಶ್ಲೀಲ ನಿಂದನೆ?

ವೈರಲ್ ವಿಡಿಯೋ ಹಿನ್ನೆಲೆ ಗೋಕಾಕ ಪೊಲೀಸ್ ಠಾಣೆ ವಿವಾದಕ್ಕೆ ತಿರುವು

Advertisement

“ತಪ್ಪು ಯಾರೇ ಮಾಡಿದರೂ ಕ್ರಮ” — ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

Advertisement

news_1778048979_0_441.webp

ವಿಶೇಷ ವರದಿ BB NEWS KANNADA

📍ಬೆಳಗಾವಿ | ಗೋಕಾಕ ಟೌನ್ ಪೊಲೀಸ್ ಠಾಣೆಯ ಪಿಎಸ್‌ಐ ಕಿರಣ ಮೋಹಿತೆ ಅವರ ವಿರುದ್ಧ ಸಾರ್ವಜನಿಕನೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪ ಕೇಳಿಬಂದಿದ್ದು, ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಘಟನೆಯ ನಂತರ ಪೊಲೀಸ್ ಇಲಾಖೆಯ ವರ್ತನೆ ಕುರಿತು ಸಾರ್ವಜನಿಕ ವಲಯದಲ್ಲಿ ಪ್ರಶ್ನೆಗಳು ಕೇಳಿಬರುತ್ತಿವೆ.

Gokak PSI Kiran mohiti
Gokak PSI Kiran mohiti

ನ್ಯಾಯ ಕೇಳಲು ಹೋದ ವ್ಯಕ್ತಿಗೆ ಅವಮಾನ?

ಮಾಹಿತಿಯ ಪ್ರಕಾರ, ದೂರುದಾರರು ಕೊಲೆ ಯತ್ನ (Attempt to Murder) ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ದೂರು ನೀಡಿದ್ದರು. ಆ ಪ್ರಕರಣದ ಸ್ಥಿತಿಗತಿ ಏನಾಗಿದೆ ಎಂಬುದನ್ನು ತಿಳಿದುಕೊಳ್ಳಲು ಸಂಬಂಧಪಟ್ಟ ವ್ಯಕ್ತಿ ಸೌಮ್ಯವಾಗಿ ಪಿಎಸ್‌ಐರನ್ನು ಸಂಪರ್ಕಿಸಿದ್ದಾನೆ ಎನ್ನಲಾಗಿದೆ.

news_1778905892_0_440.webp

ಈ ವೇಳೆ ಪಿಎಸ್‌ಐ ಕಿರಣ ಮೋಹಿತೆ ಆಕ್ರೋಶ ವ್ಯಕ್ತಪಡಿಸಿ, “ನಿನ್ನ ಬಾಯಲ್ಲಿ ಬೂಟ್ ಹಾಕ್ತೀನಿ” ಎಂಬ ನಿಂದನೀಯ ಪದ ಬಳಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ವೇಳೆ ಮಾತಿನ ಚಕಮಕಿ ನಡೆದಿದ್ದು, ಅದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

news_1778142080_0_556.webp

ವಿಡಿಯೋ ವೈರಲ್ ಆದ ನಂತರ, “ಜನರನ್ನು ರಕ್ಷಿಸಲು ಪೊಲೀಸ್ ಇಲಾಖೆ ಇದೆಯೇ ಅಥವಾ ಬೆದರಿಕೆ ಹುಟ್ಟಿಸಲು?” ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬರ ಈ ರೀತಿಯ ವರ್ತನೆ ಖಾಕಿ ಗೌರವಕ್ಕೆ ಧಕ್ಕೆ ತಂದಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

news_1777986246_0_709.webp

ಪ್ರಕರಣದ ಮತ್ತೊಂದು ಮುಖ

ಇನ್ನೊಂದೆಡೆ, ಪೊಲೀಸ್ ಮೂಲಗಳಿಂದ ಬೇರೆ ರೀತಿಯ ಮಾಹಿತಿಯೂ ಹೊರಬಂದಿದೆ. ದೂರುದಾರರು ನೀಡಿದ್ದ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟ ಸಾಕ್ಷ್ಯಾಧಾರಗಳಿರಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂದು ಸಂಬಂಧಪಟ್ಟ ಇನ್ಸ್‌ಪೆಕ್ಟರ್ ತಿಳಿಸಿದ್ದರು ಎನ್ನಲಾಗಿದೆ.

news_1777986272.webp

ಅಲ್ಲದೆ, ಕಳೆದ ಒಂದು ತಿಂಗಳಿನಿಂದ ಪದೇ ಪದೇ ಸುಳ್ಳು ದೂರು ದಾಖಲಿಸಲು ಒತ್ತಾಯಿಸಲಾಗುತ್ತಿತ್ತು ಎಂಬ ಮಾಹಿತಿಯೂ ಇಲಾಖೆಯ ವಲಯದಲ್ಲಿ ಚರ್ಚೆಯಲ್ಲಿದೆ. ಈ ವಿಚಾರವನ್ನು ದೂರುದಾರರ ಗಮನಕ್ಕೂ ತರಲಾಗಿತ್ತು ಎಂದು ಮೂಲಗಳು ತಿಳಿಸಿವೆ.

news_1777804083.webp

ಎಸ್ಪಿ ಸ್ಪಷ್ಟನೆ

ಈ ಕುರಿತು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದು, “ಯಾರೇ ಆಗಿರಲಿ ತಪ್ಪು ಮಾಡಿದವರ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು. ಪಿಎಸ್‌ಐ ಕಿರಣ ಮೋಹಿತೆ ವಿರುದ್ಧದ ಆರೋಪಗಳ ಕುರಿತು ವರದಿ ನನ್ನ ಗಮನಕ್ಕೆ ಬಂದಿದೆ. ಯಾವುದೇ ರೀತಿಯ ಒತ್ತಡ ಅಥವಾ ಪ್ರಭಾವಕ್ಕೆ ಒಳಗಾಗಿ ನಡೆದುಕೊಳ್ಳುವುದಿಲ್ಲ. ಸತ್ಯಾಸತ್ಯತೆ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು” ಎಂದು ಸ್ಪಷ್ಟಪಡಿಸಿದ್ದಾರೆ.

news_1777804015_0_413.webp

ಸಾರ್ವಜನಿಕರ ಒತ್ತಾಯ

ಸದ್ಯ ಈ ಘಟನೆ ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರ ನಡುವಿನ ನಂಬಿಕೆಯ ಪ್ರಶ್ನೆಯನ್ನು ಮತ್ತೆ ಮುಂದಿಟ್ಟಿದೆ. ವೈರಲ್ ವಿಡಿಯೋ ಹಿನ್ನೆಲೆ ಘಟನೆಯ ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯ ಹೊರತರುವುದು ಅಗತ್ಯ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

news_1777542755_0_368.webp

Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಗ್ರಾಮ ಪಂಚಾಯಿತಿಯಲ್ಲಿ ನಕಲಿ ಸಹಿ ಆರೋಪ: ₹39,600 ಡ್ರಾ ಪ್ರಕರಣಕ್ಕೆ ಹೊಸ ತಿರುವುಜೋಳ ಖರೀದಿ ಸ್ಥಗಿತ: ಜಿಲ್ಲಾಧಿಕಾರಿಗಳಿಗೆ ರೈತರ ತುರ್ತು ಮನವಿಅಪಪ್ರಚಾರಕ್ಕೆ ಕಿವಿಗೊಡಬೇಡಿ: ಆರ್. ಸಿದ್ದನಗೌಡ ತುರವಿಹಾಳ ಮನವಿಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾಗಿ ಎನ್. ಸತ್ಯನಾರಾಯಣ ಶೆಟ್ಟಿ ಸಿಂಧನೂರಿಗೆ ಡಬಲ್ ಧಮಾಕಾ..? ಇಬ್ಬರು ಬಾದರ್ಲಿಗಳಿಗೆ ಸಚಿವ ಸ್ಥಾನ ಸಿಗುತ್ತಾ..?“ಸಿದ್ದರಾಮಯ್ಯ ವ್ಯಕ್ತಿ ಅಲ್ಲ… ಒಂದು ಶಕ್ತಿ”“ಸಿದ್ದು ಸರ್ಕಾರ ಪತನ..! ಇಂದಿನಿಂದ ಎಲ್ಲಾ ಸಚಿವರು ಮಾಜಿ ಸಚಿವರು”ಬುಕ್ಕನಟ್ಟಿ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಬಸವನಗೌಡ ಬಾದರ್ಲಿಗೆ ಸಚಿವ ಸ್ಥಾನ ಫಿಕ್ಸ್ ಆಗ್ತಿದೆಯಾ..?8 ವರ್ಷದ ಮಕ್ಕಳಿಗೆ ಮುಟ್ಟು..! ಬಾಲ್ಯ ಕಸಿದುಕೊಳ್ಳುತ್ತಿರುವ ಪಿಜ್ಜಾ-ಬರ್ಗರ್ ಸಂಸ್ಕೃತಿ..?ಅಕ್ರಮ ಗೋ ಸಾಗಾಟ ಹಾಗೂ ಗೋಹತ್ಯೆ ತಡೆಗೆ ಕ್ರಮ ಕೈಗೊಳ್ಳುವಂತೆ ಮನವಿಸರಕಾರಿ ನೌಕರಿ,ಸಂಬಳ ಬೇಕು ಆದರೆ ನಿಯಮ ಬೇಡವಾ...?ಪಿಸ್ತೂಲ್‌ನೊಂದಿಗೆ ಓಡಾಡುತ್ತಿರುವ ಉಪಲೋಕಾಯುಕ್ತ ಬಿ.ವೀರಪ್ಪ“ಕಾಕ್‌ರೋಚ್ ಜನತಾ ಪಾರ್ಟಿ” ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ಸಹನಾ ಮಕ್ಕಳ ಆಸ್ಪತ್ರೆಯ ವೈದ್ಯಕೀಯ ಸಾಧನೆ